ಮಾರ್ಕಂಡೇಯ ನಗರ ಗೋಕಾಕ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಕ್ಟಿಜನ್ ಕ್ಲಬ್ 2025-26 ಚಟುವಟಿಕೆಗಳ ಉದ್ಘಾಟನೆ

ಆಕ್ಟಿಜನ್ ಕ್ಲಬ್ ಉದ್ಘಾಟನಾ ಸಮಾರಂಭ

ಇಂದು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮಾರ್ಕಂಡೇಯ ನಗರ ಗೋಕಾಕದಲ್ಲಿ ದೇಶ ಅಪ್ನಾಯೆನ್ ಸಹಯೋಗ ಫೌಂಡೇಶನ್ ವತಿಯಿಂದ ನಡೆಸುತ್ತಿರುವ ಆಕ್ಟಿಜನ್ ಕ್ಲಬ್ 2025-26 ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಗೋಕಾಕ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಜಿ ಬಿ ಬಳಗಾರ ಸರ್ ನೆರವೇರಿಸಿದರು ಈ ಸಂದರ್ಭದಲ್ಲಿ ಚಿಕ್ಕೋಡಿ ವಿಭಾಗದ ದೇಶ ಅಪ್ನಾಯೆನ್ ಸಹಯೋಗ ಫೌಂಡೇಶನದ ಮುಖ್ಯಸ್ಥರಾದ ಶ್ರೀ ಈಶ್ವರ ಕಂಬಾರ ಹಾಗೂ ಶಾಲೆಯ ಪ್ರಧಾನ ಗುರುಗಳಾದ ಶ್ರೀ ಎಮ್ ಎಮ್ ಅಳಗುಂಡಿ ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಈ ವೇಳೆ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಗೋಕಾಕ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಜಿ ಬಿ ಬಳಗಾರ ಸರ್ ಅವರು ದೇಶ ಅಪ್ನಾಯೆನ್ ಸಹಯೋಗ ಫೌಂಡೇಶನ್ ವತಿಯಿಂದ ನಡೆಸುತ್ತಿರುವ ಆಕ್ಟಿಜನ್ ಕ್ಲಬ್ ಕಾರ್ಯ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ಹೊಸ ಕಲಿಕೆಯನ್ನು ಉಂಟು ಮಾಡುತ್ತಿದೆ ಎಂದರು. ಮತ್ತು ಸಕ್ರಿಯ ನಾಗರಿಕತ್ವವನ್ನು ವಿದ್ಯಾರ್ಥಿಗಳಿಗೆ ಮೂಡಿಸುವುದರೊಂದಿಗೆ ನನ್ನ ಶಾಲೆ ನನ್ನ ಹೆಮ್ಮೆ ಎನ್ನುವ ಭಾವನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಿರುವುದು ಹೆಮ್ಮೆಯ ವಿಷಯ ವಾಗಿದೆ ಎಂದು ಹೇಳಿದರು.

ದೇಶ ಅಪ್ನಾಯೆನ್ ಸಹಯೋಗ ಫೌಂಡೇಶನ್ ಕಾರ್ಯ ಹೀಗೆ ಸಾಗಲಿ ಎಂದು ಹಾರೈಸಿದರು.

Leave a Reply

Your email address will not be published. Required fields are marked *