ಆರೋಗ್ಯಸಿರಿ ಮಹಿಳಾ ಯೋಗ ಕೇಂದ್ರ ಕಮತನೂರಿನಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮ

ಇಂದು ಆರೋಗ್ಯಸಿರಿ ಮಹಿಳಾ ಯೋಗ ಕೇಂದ್ರ ಕಮತನೂರಿನಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಶ್ರೀ L K ಖೋತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ S I ಮಡಿವಾಳಪ್ಪಗೋಳ ಅವರು ಮಾತನಾಡಿ ಜ್ಞಾನ ಮತ್ತು ಸಂಸ್ಕಾರವನ್ನು ವಿದ್ಯಾರ್ಥಿಗಳಿಗೆ ನೀಡುವಲ್ಲಿ ಗುರುವಿನ ಪಾತ್ರ ಬಹಳ ಮಹತ್ವ ವಾದದ್ದು ಉತ್ತಮ ಸಮಾಜವನ್ನು ನಿರ್ಮಿಸುವುದರಲ್ಲಿ ಗುರುವಿನ ಪಾತ್ರ ಅಮೂಲ್ಯವಾದದ್ದು ಎಂದು ಹೇಳಿದರು. ಸುಮಾರು 3 ತಿಂಗಳಿನಿಂದ ಗ್ರಾಮೀಣ ಭಾಗದ ಮಹಿಳೆಯರಿಗಾಗಿ ಯೋಗಾಭ್ಯಾಸವನ್ನು ತಿಳಿಸಿಕೊಡುತ್ತಿರುವ ಶ್ರೀಮತಿ S I ಮಡಿವಾಳಪ್ಪಗೋಳ ಮೇಡಂ ಅವರ ಕಾರ್ಯ ಶ್ಲಾಘನೀಯವಾದದ್ದು. ಈ ವೇಳೆ ಆರೋಗ್ಯ ಸಿರಿ ಮಹಿಳಾ ಯೋಗ ಕೇಂದ್ರದ ಎಲ್ಲ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *