ಸಾರಾಪೂರ ಗ್ರಾಮದ ಶ್ರೀ ಮಹಾಕಾಳಿದೇವಿ ಜಾತ್ರಾ ಉತ್ಸವ-2026

ಹುಕ್ಕೇರಿ ತಾಲೂಕಿನ ಸಾರಾಪುರ ಗ್ರಾಮದಲ್ಲಿರುವ ಶ್ರೀ ಮಹಾಕಾಳಿ ದೇವಿ ಜಾತ್ರಾ ಮಹೋತ್ಸವ ಪ್ರತಿವರ್ಷದಂತೆ ಈ ವರ್ಷವೂ ಗುರುವಾರ ದಿನಾಂಕ 18/06/ 2026 ರಿಂದ ಶುಕ್ರವಾರ 19/ 6/ 2026 ರ ವರೆಗೆ ಅತೀ ವಿಜೃಂಭಣೆ ಜರುಗುವುದು ಗುರುವಾರ ದಿನಾಂಕ 18/ 6 /2026 ರಂದು ಮುಂಜಾನೆ ದೇವಿಗೆ ಅಭಿಷೇಕದ ನಂತರ ಮುಂಜಾನೆ 8 ಗಂಟೆಗೆ ದಂಡವತ್ ಮತ್ತು ಶ್ರೀ ಮಹಾಕಾಳಿ ದೇವಿ ಶ್ರೀ ಹಾಲಸಿದ್ದೇಶ್ವರ ಪಲ್ಲಕ್ಕಿ ಆಗಮನ ಅದೇ ದಿವಸ ಮಧ್ಯಾಹ್ನ 12 ಗಂಟೆಗೆ ಮಹಾಪ್ರಸಾದ ಜರುಗುವುದು
ಜಾತ್ರಾ ಮಹೋತ್ಸವದ ನಿಮಿತ್ಯ ವಿವಿಧ ಕಾರ್ಯಕ್ರಮಗಳು
ಹೋರಿ ಕೈಯಲ್ಲಿ ಹಿಡಿದು ಓಡುವ ಶರ್ತು, ಸೈಕಲ್ ಶರ್ತು, ಕುದುರೆ ಗಾಡಿ ಶರ್ತು,ಜನರಲ್ ನವತರ ಕುದುರೆ ಗಾಡಿ ಶರ್ತು, ಜೋಡೆತ್ತಿನ ಗಾಡಿ ಶರ್ತು, ಹಾಗೂ ಅದೇ ದಿನ ಗುರುವಾರ ರಾತ್ರಿ 8:30 ಗಂಟೆಗೆ ಬಾಸ್ ಮೆಲೋಡಿಸ್ ಕಲಾ ತಂಡ ಸಾರಾಪುರ ಇವರಿಂದ ರಸ ಮಂಜರಿ ಕಾರ್ಯಕ್ರಮ ಜರಗುವುದು

Leave a Reply

Your email address will not be published. Required fields are marked *