
80 ನೇಯ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ಯ ಗೋಕಾಕ ತಾಲೂಕಿನ ಖಾನಾಪುರ (ಸಾವಳಗಿ) ಗ್ರಾಮದಲ್ಲಿ ಶ್ರೀ ಮರಳಮ್ಮ ತಾಯಿ ಸಹಕಾರ ಸಂಘ ನಿ. ಖಾನಾಪೂರ(ಸಾವಳಗಿ ) ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ಸಂಸ್ಥೆಯ ಆವರಣದಲ್ಲಿ ಅಧ್ಯಕ್ಷರಾದ ಅಮರ ಅಶೋಕ ಮಡಿವಾಳರ ಹಾಗೂ ನಿರ್ದೇಶಕರಾದ ವಿನಾಯಕ ಶಿರಹಟ್ಟಿ ಯವರು ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಬಸವರಾಜ ಶಿರಮಾಯಿ, ಶ್ರೀಕಾಂತ ನಾಯಿಕ, ಸುಭಾಸ ಹುಲ್ಲೋಳಿ , ರಮೇಶ ಗುಂತಕಲ, ಅಭಿಷೇಕ ದಾಸರ,ಶಿವಾನಂದ ಕರಿಗಾರ, ಶಿವಲಿಂಗ ಕಬಾಡಗಿ, ಬಸವರಾಜ ಕುಂಬಾರ, ಅರುಣ ಕೋರಿ,ಹಾಗೂ ಊರಿನ ಪ್ರಮುಖರಾದ ಶ್ರೀ ಪವಾಡಯ್ಯಾ ಹಿರೇಮಠ,ಲಗಮಣ್ಣ ಕರಿಗಾರ ಮತ್ತು ಮುದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರಾದ ಶ್ರೀ ಎಸ್ ಎಸ್ ಮಾಸ್ತಮರಡಿ, ಕೆಂಪಣ್ಣ ಮಗದುಮ್ಮ, ಮತ್ತು ಸಂಘದ ಅಧಿಕಾರಿಗಳು ರೇವಣ್ಣ ಗುರ್ಲಾಪುರ, ಮಹಾಂತೇಶ ಮಗದುಮ್ಮ, ಸೇರಿದಂತೆ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿಗಾರರು -ರಮೇಶ ಗುಂತಕಲ್
(ಕರುನಾಡ ಪ್ರಪಂಚ )