
ಬೆಲ್ಲದ ಬಾಗೇವಾಡಿ: ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ಶ್ರೀ ಬಾಹುಬಲಿ ವಿದ್ಯಾಪೀಠ ಹಾಗೂ ಭರತೇಶ ವಿದ್ಯಾ ಮಂಡಳದ ಆಶ್ರಯದಲ್ಲಿ ೮೦ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆ ಮತ್ತು ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಶ್ರೀ ಶಾಂತಿನಾಥ ಮುನ್ನೋಳಿ ಅವರು ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶುಭ ಹಾರೈಸಿದರು.ಈ ಶುಭ ಸಮಾರಂಭದಲ್ಲಿ ಆಡಳಿತ ಮಂಡಳಿಯ ಪ್ರಮುಖ ಪದಾಧಿಕಾರಿಗಳಾದ ಶ್ರೀ ಪಾರೇಶ ಬೆಳವಿ, ಶ್ರೀ ಬಾಹುಬಲಿ ಕಾಗವಾಡೆ ಹಾಗೂ ಶ್ರೀ ಪ್ರವೀಣ್ ಮುನ್ನೋಳಿ ಅವರು ಉಪಸ್ಥಿತರಿದ್ದರು. ಇದರೊಂದಿಗೆ ಸಂಸ್ಥೆಯ ಆರು ವಿಭಾಗಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸರ್ವ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.ಧ್ವಜಾರೋಹಣದ ನಂತರ ಸಂಸ್ಥೆಯ ಆರು ವಿಭಾಗಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ವಿದ್ಯಾರ್ಥಿಗಳ ಶಿಸ್ತುಬದ್ಧ ಹೆಜ್ಜೆಗಳು ನೆರೆದಿದ್ದವರ ಕಣ್ಣುಮನ ಸೆಳೆದವು. ತದನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಹಾಗೂ ಸುಂದರವಾದ ಸಾಂಸ್ಕೃತಿಕ ಪ್ರದರ್ಶನಗಳು ಮೂಡಿಬಂದವು.
ಸಮಾರಂಭದ ಕೊನೆಯಲ್ಲಿ ಶ್ರೀಮತಿ ಪಠಾನ್ ಅವರು ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರೂಪಿಸಿ, ಆಗಮಿಸಿದ ಎಲ್ಲ ಗಣ್ಯರಿಗೆ, ಸಿಬ್ಬಂದಿಗೆ ಹಾಗೂ ವಿದ್ಯಾರ್ಥಿಗಳಿಗೆ ವಂದನಾರ್ಪಣೆ ಸಲ್ಲಿಸಿದರು.