
ನಾವು ದಿನನಿತ್ಯದ ಜೀವನದ ಜಂಜಾಟದಲ್ಲಿ ಪ್ರೀತಿ ಪ್ರೇಮ ಮಾನವೀಯತೆ ಮರೆತು ದ್ವೇಷ ಅಸೂಯೆ ಇವುಗಳ ಅಡಿಯಾಳಾಗಿ ಮಾನವನ ಬದುಕನ್ನು ಅರ್ಥಹೀನ ವಾಗಿ ಬದುಕುತ್ತಿರುವುದು ವಿಪರ್ಯಾಸವಾಗಿದೆ ಮಾನವನ ಬಿಟ್ಟು ಉಳಿದೆಲ್ಲ ಪ್ರಾಣಿ ಪಕ್ಷಿಗಳನ್ನು ನೋಡಿದಾಗ ಒಂದೊಂದು ಮಹತ್ವದ ಅಂಶವನ್ನು ನಾವು ಕಲಿಯಬೇಕಾಗಿದೆ ಮೂರು ದಿನದ ಈ ಬದುಕಿನ ಸಂತೆಯಲ್ಲಿ ಸಂತೋಷದ ಗಳಿಗೆ ಇಲ್ಲದಂತಾಗಿದೆ ಒಮ್ಮೆ ಯೋಚಿಸಿ ಮಾನವನ ಜೀವನ ಮೌಲ್ಯಯುತವಾದದ್ದು ಮಾನವನ ಜೀವನ ಸಾರ್ಥಕವಾಗಬೇಕಾದರೆ ಪ್ರೀತಿ ಮಮಕಾರ ಮಾನವೀಯತೆ ಬಂಧಗಳನ್ನು ಹಂಚುವ ಕೆಲಸ ಮಾಡುವುದು ಬಹಳ ಮಹತ್ವವಾಗಿದ್ದೆ ಜಗದಲ್ಲಿ ಸಾವಿನೋಡನೆ ತೆಗೆದುಕೊಂಡು ಹೋಗುವುದು ಏನೂ ಇಲ್ಲ ಇದ್ದಾಗ ಅಹಂಕಾರದಿಂದ ಮೆರೆಯುವುದನ್ನು ಬಿಟ್ಟು ಮಮಕಾರದಿಂದ ಮೆರೆಯುವುದನ್ನು ಕಲಿಯಬೇಕಾಗಿದೆ ಆಗ ಮಾನವನ ಜೀವನ ಸಾರ್ಥಕವೆನಿಸುತ್ತದೆ