ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಗಳಿ ಶಾಲೆಗೆ ಭೇಟಿ ನೀಡಿದ ಆಕ್ಟಿಜನ್ ಕ್ಲಬ್ ಕಾರ್ಯಕ್ರಮದ ಕರ್ನಾಟಕದ ಪ್ರೋಗ್ರಾಂ ಮ್ಯಾನೇಜರ್ ಶ್ರೀ ಮಹಾದೇಶ್

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಗಳಿ ಶಾಲೆಗೆ ದೇಶ ಅಪ್ನಾಯೆನ್ ಸಹಯೋಗ ಫೌಂಡೇಶನ್ ವತಿಯಿಂದ ನಡೆಸುವ ಆಕ್ಟಿಜೆನ್ ಕ್ಲಬ್ ಕಾರ್ಯಕ್ರಮದ ಕರ್ನಾಟಕದ ಪ್ರೋಗ್ರಾಮ್ ಮ್ಯಾನೇಜರ್ ಆದ ಶ್ರೀ ಮಹಾದೇಶ್ ಅವರು ಭೇಟಿ ನೀಡಿದರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದಿನ ಮಕ್ಕಳೇ ನಾಳಿನ ಉತ್ತಮ ಪ್ರಜೆಗಳು ದೇಶವನ್ನು ಸದೃಢವಾಗಿ ರೂಪಿಸಬೇಕಾದರೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಸಂಸ್ಕಾರವಂತ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಿಕೊಡುವುದರೊಂದಿಗೆ ಸಕ್ರಿಯ ನಾಗರಿಕತ್ವದ ಅರಿವು ವಿದ್ಯಾರ್ಥಿಗಳಲ್ಲಿ ಮೂಡಬೇಕು ತಮ್ಮ ಸಂಸ್ಥೆಯ ಮೂಲತತ್ವಗಳಾದ ಅಲರ್ಟ್, ಇನ್ಫಾರ್ಮ್ ಮತ್ತು ಆಕ್ಟಿವ್ ವಿದ್ಯಾರ್ಥಿಗಳಲ್ಲಿ ಮೂಡಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ ದೇಶ ಅಪ್ನಾಯೆನ್ ಸಹಯೋಗ ಫೌಂಡೇಶನ್ ಸಂಸ್ಥಾಪಕರಾದ ಶ್ರೀ ವಲ್ಲಭ ಭನಸಾಲಿ ಅವರು ಕಂಡ ಕನಸು ನನಸಾಗಬೇಕಾದರೆ ಮಕ್ಕಳಲ್ಲಿ ಜಾಗೃತ ಮನೋಭಾವ ಬೆಳೆಯಬೇಕಾದದ್ದು ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು

Leave a Reply

Your email address will not be published. Required fields are marked *