
ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಗಡಿ ನಾಡಿನ ಹೆಮ್ಮೆಯ ಕವಿ ಶ್ರೀ ಕಾಡೇಶ ಬಸ್ತವಾಡಿಯವರ ಎರಡು ಪುಸ್ತಕಗಳ (ಮನಸೇ ನಿನಗೆ ನನ್ನ ನಮಸ್ಕಾರ ಮತ್ತು ಕಂದೀಲದ ಬೆಳಕು ಕವನ ಸಂಕಲನ) ಬಿಡುಗಡೆಯ ಸಮಾರಂಭ ಸಂಕೇಶ್ವರ ಪಟ್ಟಣದಲ್ಲಿ ಇತ್ತೀಚೆಗೆ ಅತೀ ಸಂಭ್ರಮದಿಂದ ಜರುಗಿತು.ಚಲನಚಿತ್ರ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಶ್ರೀ ಕಾಡೇಶ ಬಸ್ತವಾಡಿಯವರ ಸೇವೆ ಅಪಾರವಾದದ್ದು. ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಸುವರ್ಣಾ ಪಾಟೀಲ, ಶಾಂತಾದೇವಿ ಪಾಟೀಲ,ಗುರುರಾಜ ರೊಟ್ಟಿ ಹಾಗೂ ಈರಣ್ಣವರ ಗುರುಗಳು ಸೇರಿದಂತೆ ರಾಷ್ರೀಯ ಬಸವದಳ ಸಂಕೇಶ್ವರದ ಶರಣ ಶರಣೆಯರು ಭಾಗಿಯಾಗಿದ್ದರು
