ತಂದೆ-ತಾಯಿ ಎಂಬ ದೈವ ಶಕ್ತಿ..!!

ನಮ್ಮ ಜೀವನದಲ್ಲಿ ತಂದೆ ತಾಯಿಯ ಪಾತ್ರ ಎಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆದರೆ ಈಗಿನ ಯುವ ಜನತೆಯಲ್ಲಿ ಹಿರಿಯರಿಗೆ ಹಾಗೂ ತಂದೆ ತಾಯಿಗಳಿಗೆ ನೀಡುವ ಗೌರವ ಹಾಗೂ ಮಹತ್ವದ ಅರಿವು ಕಡಿಮೆಯಾಗುತ್ತಿದೆ .ಅದಕ್ಕೆ ಕಾರಣ ಸಾವಿರಾರು ಇರಬಹುದು ಆದರೆ ಯುವ ಮನಸುಗಳೆ ನಿಮ್ಮ ತಂದೆ ತಾಯಿಯರ ತ್ಯಾಗವನ್ನು ಒಮ್ಮೆ ನೆನೆದು ನೋಡಿ ನಿಮಗಾಗಿ ಅವರು ಪಟ್ಟ ಕಷ್ಟವನ್ನು ಒಮ್ಮೆ ಕಣ್ಮುಂದೆ ತಂದುಕೊಳ್ಳಿ ಆ ನಿಮ್ಮ ತಂದೆ ತಾಯಿಯ ಕಷ್ಟ ಸಂಕಷ್ಟದ ಅರಿವು ನಿಮಗೆ ಆಗುತ್ತದೆ. ಅದರಲ್ಲಿಯೂ ತಂದೆಯ ಕಷ್ಟದ ಬಗ್ಗೆ ಸ್ವಲ್ಪ ಯೋಚಿಸಿ ತಾನು ಚಪ್ಪಲಿ ಹಾಕಿಕೊಳ್ಳದಿದ್ದರೂ ಪರವಾಗಿಲ್ಲ ಆದರೆ ನನ್ನ ಮಗನ ಕಾಲಲ್ಲಿ ಒಳ್ಳೆಯ ಶೋ ಹಾಕಿಕೊಳ್ಳಬೇಕು ತಾನೂ ಹರಿದ ಬಟ್ಟೆ ಹಾಕಿದರೂ ಸರಿ ನನ್ನ ಮಗ ಹೊಸ ಬಟ್ಟೆಯನ್ನೇ ಹಾಕಿಕೊಳ್ಳಬೇಕು ಎನ್ನುವ ನಿಷ್ಕಲ್ಮಶ ಮನಸ್ಸು ತಂದೆಯದಾಗಿರುತ್ತೆ.

ಎಲ್ಲಿದ್ದರು ಹೇಗಿದ್ದರೂ ನನ್ನ ಮಕ್ಕಳು ಸಂತೋಷದಿಂದ ಇರಬೇಕು ಎನ್ನುವ ತಂದೆ-ತಾಯಿಯ ಮುಂದೆ ಮತ್ಯಾವ ಮೌಲ್ಯವಾದ ಬೆಲೆಕಟ್ಟಲಾಗದ ವಸ್ತು ಇದೆ ನೀವೇ ಹೇಳಿ ಅದಕ್ಕೆ ಆ ದೇವರು ಜಗದಲ್ಲಿ ಎಲ್ಲ ಮಾನವರನ್ನು ಪ್ರೀತಿಯಿಂದ ನೋಡಿಕೊಳ್ಳಲು ತನ್ನಿಂದ ಬಲು ಕಷ್ಟ ಎಂದು ತಂದೆ ಥಾಯಿಯನ್ನು ನೀಡಿದ ಆ ತಂದೆ ತಾಯಿಯಲ್ಲಿ ದೈವತ್ವದ ಭಾವವನ್ನು ನಾವು ಕಾಣಬೇಕು ಅದೆಲ್ಲವನ್ನು ಬಿಟ್ಟು ನಾವು ತಂದೆ ತಾಯಿಯನ್ನು ಅಗೌರವದಿಂದ ಕಾಣುವುದು ಅವರನ್ನು ಹೀನಾಯವಾಗಿ ನೋಡಿಕೊಳ್ಳುವುದು ನಮಗೆ ನಾವೇ ಮಾಡಿಕೊಳ್ಳುವ ಮೋಸವಾಗುತ್ತದೆ.

ಮನೆಯಲ್ಲಿರುವ ತಂದೆ ತಾಯಿಗಿಂತ ಮಿಗಿಲಾದ ದೇವರು ಈ ಪ್ರಪಂಚದಲ್ಲಿ ಎಲ್ಲಯೂ ಇಲ್ಲ ಮನೆಲ್ಲಿರುವ ಆ ಹಿರಿಯ ಜೀವಗಳನ್ನು ಪ್ರೀತಿಯಿಂದ ಕಾಣಿ ಮಮತೆಯಿಂದ ನೋಡಿಕೊಳ್ಳಿ ಈ ಜಗದಲ್ಲಿ ನಾವು ಸಂಪಾದಿಸಿದ್ದು ನಮ್ಮ ಜೊತೆಗೆ ಏನೂ ಬರುವುದಿಲ್ಲ ನಮ್ಮ ಜೊತೆಗೆ ಬರುವುದೊಂದೆ ನಾವು ಮಾಡಿದ ಒಳ್ಳೆಯ ಕಾರ್ಯಗಳು ಮಾತ್ರ

Leave a Reply

Your email address will not be published. Required fields are marked *