ಹಿರಿಯ ಸಾಹಿತಿ ಶ್ರೀ ಎಸ್ ಎಮ್ ಶಿರೂರ ಅವರ ಅಭಿನಂದನ ಗ್ರಂಥ ಸಮಾರಂಭದ ಸಭೆ

ಹಿರಿಯ ಸಾಹಿತಿ ಶ್ರೀ ಎಸ್ ಎಮ್ ಶಿರೂರ ಅವರ ಅಭಿನಂದನ ಗ್ರಂಥ ಸಮಾರಂಭದ ಸಭೆ

ಮಂಗಳವಾರ ದಿ.07.10.2025 ರಂದು ಹಿರಿಯ ಸಾಹಿತಿ,ಶರಣ,ಶ್ರೀ. ಎಸ್. ಎಮ್. ಶಿರೂರ ಅಭಿನಂದನ ಗ್ರಂಥ ಸಮಾರಂಭದ ಸಭೆಯು ಹಿಡಕಲ್ ಡ್ಯಾಮ್ ನ ಶ್ರೀ ಶಿವಾಲಯ ಕಲ್ಯಾಣ ಮಂಟಪದಲ್ಲಿ ಜರುಗಿತು.ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ದಿನಾಂಕ – 02.11.2025, ಸ್ಥಳ-ಶ್ರೀ ಶಿವಾಲಯ ಕಲ್ಯಾಣ ಮಂಟಪದಲ್ಲಿ ಮಾಡಲು ನಿರ್ಣಯಿಸಲಾಯಿತು. ಹಾಗೂ ಅಧ್ಯಕ್ಷರು,ಮುಖ್ಯ ಅತಿಥಿಗಳು,ವಿಶೇಷ ಆಮಂತ್ರಿತ ಅತಿಥಿಗಳು ಮುಂತಾದ ವಿಷಯಗಳ ಕುರಿತು ಎಲ್ಲ ಸಾಹಿತಿಗಳು, ಪ್ರಾಧ್ಯಾಪಕರು, ಶಿಕ್ಷಕರು,ಅಭಿಮಾನಿಗಳು ಹಾಗೂ ಶಿಷ್ಯ ಬಳಗ ಸೇರಿ ಸಮಕ್ಷಮ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳ ಲಾಯಿತು.ಸಭೆಯಲ್ಲಿ ಪ್ರೋ.ಪ್ರಕಾಶ.ಅ.ಅವಲಕ್ಕಿ, ಡಾ.ರಾಜಶೇಖರ. ಇಚ್ಚಂಗಿ ,ಶ್ರೀ.ಬಸವರಾಜ.ಗಾರ್ಗಿ.ಶ್ರೀ.ಆರ್.ಕರುಣಾ.ಶೆಟ್ಟಿ. ಶ್ರೀ.ಗಣೇಶ.ಪೂಜೇರಿ ಡಾ.ಉಮನಾದಿಮಠ, ಡಾ.ಶ್ರೀಶೈಲ ಮಠಪತಿ,ಶ್ರೀ. ಎಮ್.ಎಸ್.ಹೋಳಿಮಠ, ಶ್ರೀ.ಮಹಾವೀರ.ತೆಳಗಡಿ,ಶ್ರೀ.ಎಚ್.ಬಿ.ನಾಗಪ್ಪಗೊಳ,ಶ್ರೀ.ಮಹೇಶ.ಶಿರೂರ, ಶ್ರೀ.ಶಿವು.ತಿಗಡಿ,ಶ್ರೀಜಗತಾಪ,ಶ್ರೀ ತಿಳಗಂಜಿ,ಶ್ರೀ. ಬಿ.ಎಸ್.ಮಾನೆ,ಶ್ರೀ.ಸುಭಾಷ.ಕುಂಬಾರ,ಶ್ರೀ.ಗಜಾನಂದ.ಘೊಡಗೇರಿ, ಶ್ರೀ.ಚಂದ್ರಶೇಖರ. ಗಣಾಚಾರಿ, ಡಾ.ಕೊಟಬಾಗಿ, ಶ್ರೀಮತಿ,ಕಸ್ತೂರಿ. ಚೌಗಲಾ,ಶ್ರೀಮತಿ,ಶೋಭಾ.ಚಿಂಚಿ, ಶ್ರೀಮತಿ.ಜಯಶ್ರೀ. ಮತ್ತಿಕೊಪ್ಪ, ಶ್ರೀಮತಿ.ಬೋರಮ್ಮ. ಅಂಗಡಿ,ಶ್ರೀ.ಶಿವಾನಂದ ನಾವಿ,ಶ್ರೀ.ಮಹಾಂತೇಶ.ಹೊಸಮನಿ, ಶ್ರೀ.ವಿಠ್ಠಲ.ಬುಕನಟ್ಟಿ, ಶ್ರೀ. ಎ.ವಾಯ್. ಸೋನ್ಯಾಗೋಳ, ಶ್ರೀ.ನಿರಂಜನ.ಶಿರೂರ ಮುಂತಾದವರಿದ್ದು, ಡಾ. ಪ್ರಕಾಶ. ಅ.ಹೊಸಮನಿರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀ. ಎಲ್ ಬಿ. ಪೂಜಾರಿ ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *